Submission 6856

ಆತ್ಮಾಭಿಮಾನ

ರಚನೆ : ಉಷಾ ದಿನೇಶ್

----------------------------------

ಕಟ್ಟದಿರಿ ಬಂಜೆ ಎನ್ನುವ ಹಣೆಪಟ್ಟಿ ಭಾವನೆಗಳು ಬರಿದಾಗಿಲ್ಲ ಅವಳಲ್ಲಿ ಚುಚ್ಚು ಮಾತಿನ ಇರಿತವದೇತಕೆ ದೂರಟ್ಟಲು ಚೀರುವುದು ಮನವಲ್ಲಿ ಪತಿಯ ವಿಯೋಗದ ನೋವಡಗಿದೆ ಅಮಂಗಲೆ ಎಂದವಳ ಅಲಕ್ಷಿಸದಿರಿ ಏಳು ಬೀಳುಗಳ ಕಂಡ ಜೀವವದು ಕಸದಂತೆ ಕಡೆಗಣಿಸುತಲಿ ಕಾಡದಿರಿ ತುಸು ಸಾಂತ್ವನ ಬಯಸುವಳಷ್ಟೇ ಬದಲಾಗಲಿ ಸಮಾಜದ ದೃಷ್ಟಿಕೋನ ಬೆಂಬಲಿಸಿ ಸಹಕರಿಸಿ ಸ್ನೇಹ ತೋರಿ ಇರುವುದು ಅವಳಿಗೂ ಆತ್ಮಾಭಿಮಾನ

----------------------------------

ನೋಂದಣಿ ಐಡಿ : KPFS2-9930

0
Votes
97
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top