ತವರಿನ ಸಂಭ್ರಮ
ರಚನೆ : ಪ್ರೇಮಾ ಅರುಣಾಚಲ ಹಿರೇಮಠ
----------------------------------
ನನಗಾಗಿ ಕಾಯುತಿಹರು ನನ್ನ ತವರಿನ ಬಳಗ ನಗುನಗುತಾ ಸ್ವಾಗತಿಸುವರು ಅವರು ನನ್ನ ಒಳಗ ಪ್ರೀತಿಯಿಂದ ಕೇಳುವರು ಕ್ಷೇಮ-ಕುಶಲ ನನಗ ಆಮೇಲೆ ಕೇಳುವರು ಉಳಿದೆಲ್ಲ ಬಳಗ. ತರತರಹದ ಅಡುಗೆಯನು ಮಾಡುವರು ನನಗ ಪ್ರೀತಿಯಿಂದ ಊಟವನ್ನು ಬಡಿಸುವರು ನನಗ ಸಾಕುಸಾಕೆಂದರು ಹಾಕುವರು ಹಂಗ ಊಟ ಆದಮೇಲೆ ಏಳಲಾಗದು ನಂಗ. ನಾಲ್ಕು ದೀನ ತವರಿನ್ನಲಿ ಹಾಯಾಗಿದ್ದ ನನಗ ಬರುವಾಗ ಆಗುವ ದುಃಖ ಹೇಳಲಾಗದು ನಿಮಗ ದುಃಖವನ್ನು ಬಚ್ಚಿಕೊಂಡು ಹೇಳುವೆನು ಅಮ್ಮಗ ಮತ್ತೆ ಬರುವೆನಮ್ಮ ನಿ ಅಳಬೇಡ ಹಂಗ.
----------------------------------
ನೋಂದಣಿ ಐಡಿ : KPFS2-9929