ಮೃಣ್ಮಯದಿಂದ ಚಿನ್ಮಯಕೆ
ರಚನೆ : ಸಂದೇಶ್ ನಾಯ್ಕ್ ಕೆ.ಎಸ್
----------------------------------
ಈ ದೇಹ ಮೃಣ್ಮಯ, ಅಳಿದು ಹೋಗುವ ಮಣ್ಣಿನ ಕುಡಿಕೆ, ಅದರೊಳಗೆ ಬೆಳಗುತಿದೆ ಆತ್ಮವೆಂಬ ಅಮೃತದ ಹನಿ, ಹುಡುಕೆ! ಜಗವಿದು ಮಾಯೆಯ ಸಂತೆ, ಮೋಹದ ಬಲೆಯ ಬೀಸಿದೆ, ವಿವೇಕದ ಖಡ್ಗವ ಹಿಡಿ, ಅಜ್ಞಾನದ ಕತ್ತಲನು ಸೀಳಿದೆ. ಸಂಕುಚಿತದ ಗೂಡ ಒಡೆದು, ಅನಂತದ ಹಾದಿಯ ತುಳಿ, ಜಾತಿ-ಮತದ ಸಂಕೋಲೆಯ ಕಳಚಿ, ಮುಕ್ತ ಹಕ್ಕಿಯಂತೆ ನಲಿ! ನಾನಲ್ಲ, ನೀನಲ್ಲ, ಎಲ್ಲವೂ ಆ ಮಹಾಚೇತನದ ಲೀಲೆ, ಅಹಂಕಾರವ ಸುಟ್ಟು ಭಸ್ಮಮಾಡು, ಅದೇ ಮೋಕ್ಷದ ಶಾಲೆ. ಬಾನಂಚಿನಾಚೆಗೆ ಕೈಚಾಚಿ, ನಕ್ಷತ್ರಗಳನು ಮುಡಿಗೇರಿಸು, ವಿಶ್ವಮಾನವನಾಗಿ ಬೆಳೆದು, ದೈವತ್ವವನು ಮೈಗೂಡಿಸು!.
----------------------------------
ನೋಂದಣಿ ಐಡಿ : KPFS2-9928