ಮಮತೆಯ ಗಣಿ
ರಚನೆ : ಕಾವ್ಯ ಜಿ ಎಂ
----------------------------------
ಭ್ರೂಣವಾಗಿದ್ದಾಗ ನಾನು ನಿನ್ನ ಗರ್ಭಾಂಕುರವೆನಗೆ ಹೊನ್ನಿನ ಮಡಿಲು ನನ್ನ ಬಾಲ್ಯದಲ್ಲಿ ಗುಮ್ಮನೆಂದಾಗ ನಿನ್ನ ಸೆರಗೇ ನನ್ನ ಧೈರ್ಯದ ಕಾವಲು ಪ್ರತಿ ಘಳಿಗೆಯಲ್ಲೂ ಜೊತೆಯಾಗಿ ಕರುಣಾಮೂರ್ತಿಯಂತೆ ನೀ ಎನಲು ನನ್ನ ಕನಸುಗಳ ನನಸಾಗಿಸಲು ನಿನ್ನ ಪರಿಶ್ರಮವೇ ಪ್ರೇರಣೆಯ ಹೊನಲು ನಿನ್ನ ಸೆರಗಿನ ಅಂಚಿನಲ್ಲಿಹುದು ಅಂಬರವು ಅಪೇಕ್ಷಿಸುವ ಮಮತೆ ನನ್ನೆಲ್ಲಾ ಗೆಲುವಿನ ಹಿಂದೆ ನಿನ್ನ ಪರಿಶ್ರಮದ ನೆರಳು ತುಂಬಿಹುದು ನಾ ಭೂಮಿಯ ಅಥಿಯಾಗಿರಲು ನಿನ್ನಾ ಧೈರ್ಯ ಪ್ರೀತಿ ಪ್ರೇಮವೇ ಕಾವಲು
----------------------------------
ನೋಂದಣಿ ಐಡಿ : KPFS2-9693