ಕಲ್ಲಾಗು ನೀ
ರಚನೆ : ಗದ್ದೆಪ್ಪ ಕೆಲ್ಲೂರ್
----------------------------------
ಹೇ ಮಾನವ, ಕಲ್ಲಾಗು ನೀ ಜಗದ ಜನ್ರ ಸ್ತುತಿ - ನಿಂದೆಗೆ! ಶಿಲೆಯ ಅನಂತ ಗುಣರಾಶಿ ಮನುಜ ಕುಲಕ್ಕೆ ಸ್ಫೂರ್ತಿ? ತುಂಡರಿಸಿದರೂ ನೋವಿಲ್ಲ, ಸಾವಿಲ್ಲ! ಶಿಲ್ಪಿಯ ಸಾವಿರ ಉಳಿಪೆಟ್ಟು ಸುಂದರತೆಗೆ ಸಾಕಾರ! ಮೂಜಗವ ಮೀರಿಸುವ ಮೂರುತಿಯ ಚೆಲ್ವು? ಕಿಂಚಿತ್ತು ರೂಪದ ಮಮಕಾರವಿಲ್ಲ ತುಳಿದವರ ಕಾಲೆಳೆಯುವ ಗುಣವಿಲ್ಲ? ಅರ್ಚನೆ, ಅಭಿಷೇಕ, ಗೌರವದ ಹಮ್ಮಿಲ್ಲ! ಲೋಕಕ್ಕೆ ಕಾವಲಾಗಿ ನಿಲ್ಲುವ ಜಾಯಮಾನ? ಶಿಲೆಯೇ ನಿನಗ್ಯಾರು ಸರಿಸಾಟಿ? ಹಂಗ ಹೇ ಮಾನವ ಕಲ್ಲಾಗು ನೀ!!!
----------------------------------
ನೋಂದಣಿ ಐಡಿ : KPFS2-9691