Submission 6560

ಅರಳಲಿ ಕವಿತೆ

ರಚನೆ : ಜಯಂತಿ. ರೈ

----------------------------------

ಬರೆಯ ಹೊರಟೆ ಕವಿತೆಯೊಂದು ಮನವ ತುಂಬಿದೆ ಚಿಂತೆ ನೂರೆಂಟು ಪದಗಳಿಗಾಗಿ ಅಲೆದೆ ಅಕ್ಷರದ ಜೋಳಿಗೆಯಲ್ಲಿ ಸನಿಹ ಬರಲಿಲ್ಲ ಪದಪುಂಜ ಭಾವವಿರದ ಮನದಲ್ಲಿ ಲೇಖನಿಯು ಕಾದಿದೆ ಅಕ್ಷರ ಮಾಲೆಗೆ ಹಾಳೆಯು ಪುಳಕಗೊಂಡಿದೆ ಶಾಯಿಯ ನಾಟ್ಯಕ್ಕೆ ಮನದ ಭಾವ ಅರಳದೆ ಕವಿತೆ ಬಿರಿಯುವುದೇ ತುಸು ರಂಗು ಬೀರಬೇಕು ಕವಿಮನದ ಜೀವಕ್ಕೆ ಬದುಕಿನ ಮೂಟೆಯೊಳಗಿಂದ ಇಣುಕಿ ನೋಡು ರಂಗಿರದ ಕಲ್ಪನೆಗೂ ಬಣ್ಣ ಹಚ್ಚಿ ಹಾಡು ಬದುಕಿನ ತೇರನೆಳೆಯುವ ಕರವ ನಂಬಿ ಬಿಡು ನನಸಾಗುವ ನಂಬಿಕೆಯ ಮೇಲೆ ಹೆಜ್ಜೆ ಇಡು ಚದುರಿ ಹೋಗಿರುವ ಪದಗಳ ಕೂಗೊಮ್ಮೆ ಪ್ರೇಮದಲಿ ಹೃದಯದ ಸುಪ್ತ ಭಾವ ಅರಳಲಿ ಕವಿತೆ ಸಾಲಿನಲಿ

----------------------------------

ನೋಂದಣಿ ಐಡಿ : KPFS2-9695

0
Votes
106
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top