Submission 6540

ನೂರು ಕನಸ ಕಟ್ಟಿದವಳು...

ರಚನೆ : ಅಮೂಲ್ಯ ಸಿ

----------------------------------

ನೂರು ಕನಸ ಕಟ್ಟಿದವಳು, ಮದುವೆಗೇಕೆ ಒಪ್ಪಿದಳು....? ಆಗಸದೆತ್ತರದಲಿ ಮರಚಿಗುರಿಸುವಾಸೆಯಲೇ ಬಹು ಆಳದಿ ಬೇರ ಇಳಿಸಿ ಬಿಗಿ ಮಾಡಿಹಳು ತನ್ನ ಹುಟ್ಟು ಶಾಪವೆಂದು ಭಾವಿಸಿದವರ ನಗುವಿಗಾಗಿ ಶ್ರಮಿಸುತಿಹಳು. ಮನದಿ ಅರಳಿದ ಭಾವನೆಯ ಬದಿಗೊತ್ತಿ ಬವಣೆಯ ಬಡಿಯುವ ಕನಸಿನ ಹಿಂದಿದ್ದವಳು ಕಷ್ಟದ ಪರದೆ ಸರಿಸುವಾಸೆಯವಳು, ಕಟ್ಟದ ಮನೆಗೆ ಹೆಸರಿಟ್ಟವಳು ಅದೇಕೋ ಮರಚಿಗುರಿಸುವಾಸೆ ಬಿಟ್ಟು ಬಳ್ಳಿಯಂತೆ ಬದುಕಲೋರಟಿಹಳು.

----------------------------------

ನೋಂದಣಿ ಐಡಿ : KPFS2-9676

168
Votes
1,122
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top