ಮನ ಬೆಳಕು
ರಚನೆ : ವಿಜೇತಾ ಎಸ್
----------------------------------
ಮನ ಬೆಳಕೆ ಪ್ರಕಾಶಿಸು ನರನಿಗೆ ಹರಿಯ ಸಂಧಿಸಲು, ಅಮಾನುಷ ತಮಸ್ಸನ್ನು ಸಂಹರಿಸಿ ಪರಿಚ್ಯುತನಿಗೆ ಪರಮಾತ್ಮನ ಪರಿಚಯಿಸಲು, ಮನ ಬೆಳಕೆ ಪ್ರಕಾಶಿಸು। ರವಿ-ಶಶಿ ಚಲ್ಲುವರು ಭುವಿಗೆ ಬೆಳಕ ಬಾನಂದಳದಿಂದ, ಮನ ಬೆಳಕೆ ಪ್ರಜ್ವಲಿಸು ನಭೋಮಂಡಲಕೆ ನರನ ಅಂತರಾಳದಿಂದ। ಮನದಿ ಕಾಮದ ಕೇದಿಗೆಯರಳಿ ತೃಷ್ಣೆಯು ಗರಿಗೆದರಿ-ಮುನಿಸು ಮೈದಾವರಿಸಿ ಮೋಹದ ಛಾಯೆಯು-ಮದರಸದ ಬೇರು ಭೂತಾಕರಿಸಿ ಹಗೆತನವು ವಪುವನ್ನು ಅಳಿಸುವ ಮೊದಲೇ ಮನ ಬೆಳಕೆ ಪ್ರಕಾಶಿಸು॥
----------------------------------
ನೋಂದಣಿ ಐಡಿ : KPFS2-9675