Submission 6430

ಮಡಿಲು

ರಚನೆ : ಸುಮಂಗಲಾ ಕೃಷ್ಣ

----------------------------------

ಕಡಲರಾಣಿಯ ಕಣ್ಣೊರೆಸುವವರಾರು? ಕೋಟ್ಯಾಂತರ ಜಲಚರ ಮಡಿಲಲೊತ್ತು ನಿಂತಿಹಳು ಜಲಮಾಲಿನ್ಯದಿಂದ ವಿಷ ಆವರಿಸುವ ಮುನ್ನ ಕರಮುಗಿದು ಬೇಡುತಿಹಳು ಮಲಿನಗೊಳಿಸದಿರಿ ನನ್ನ ಹಸಿವ ನೀಗಿಸಲು ನನ್ನ ಶಿಶುಗಳ ಕೊಡುತಿರುವೆ ಉಸಿರಿನಿಂದಿರುವ ನೀನು ಕಸವನೇಕೆ ಬೆರೆಸುತಿರುವೆ? ನಿನ್ನಂತೆ ಇತರರು ಬದುಕುವುದು ಬೇಡವೇ? ಧರೆಯು ಹಸಿರ ಬಸಿರನುಡಲು ಶರಧಿಯು ಬೇಕು ಅರ್ಣವ ಇಲ್ಲದೆ ವಸುಂಧರೆಯ ದೇಹ ತಣಿಯದು ಮೇದಿನಿಯ ಕುಸುಮಗಳಿಗೆ ವಾರಿಧಿಯ ಆಸರೆ ಅಬ್ಧಿಯ ಕ್ರೋಧಾಗ್ನಿಗೆ ಊರ್ವಿಯುಳಿಯುವಳೇ? ವಸುಧಾಸುತರಿಗೆಲ್ಲಿದೆ ನೆಮ್ಮದಿಯ ಜೀವನ? ಅರಿತುನಡೆ ನರನೇ ಜೀವಸಂಕುಲ ಉಳಿಸಿ ಪಡೆ...

----------------------------------

ನೋಂದಣಿ ಐಡಿ : KPFS2-9594

0
Votes
88
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top