Submission 6428

ನಗುತಿದೆ ಸತ್ಯವು

ರಚನೆ : ಮಾಲೀಕ

----------------------------------

ಧರೆಯಲಿ ತರುವೋ, ತರುವಡಿ ಧರೆಯೋ?! ಮರುಗಿದೆ ಸೃಷ್ಟಿ ವಿವಾದಕೆ ಮರುಗಿದೆ! ಧರೆಯ ಮೊಂಡುಹಠ ಅಗ್ಗದ ಸಮಾನತೆಗೆ! ನಗುತಿದೆ ಸತ್ಯ ಅವಿವೇಕಕೆ ನಗುತಿದೆ! ಫಲ ಸುಮ ದಾತಾ, ಎತ್ತರ ಚಿತ್ತದಿ ಇಳೆ ಕಂಡೆ ತುಚ್ಛದಿ! ಕುಲ ನಿಜ ಬೀಜ ಮರದ್ದೆ ಎಂದೇ ನೆಲ ಬರೀ ಮಣ್ಣೆಂದೆ! ಹನಿ ಹನಿ ಎಲೆ ನಲಿದೆ, ನೆಲ ಕೆಸರಾಗಿ ಸಂತತಿಗೆ ಉಣಿಸಿದೆ! ಬಿಸಿಲು ಗಳಿಸುವವನೇ, ಪರಾವಲಂಬಿನಿ ನೆರಳಲಿ ನೆಲವೆಂದೆ! ಹೆಣ್ಣುತನ ಅಪ್ಪಿಕೊ, ಮಣ್ಣ ತನು ಒಪ್ಪಿಕೊ ಮಹಾಗರ್ಭೆ! ಹೆಮ್ಮೆಯ ಮಣ್ಣೆನ್ನೇ! ಗರ್ವದಿ ಹೆಣ್ಣೆನ್ನೇ!

----------------------------------

ನೋಂದಣಿ ಐಡಿ : KPFS2-9592

0
Votes
90
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top