ಹಿಂಗಾರಿನ ಪ್ರೀತಿ
ರಚನೆ : ಡಾ. ದಿವ್ಯಾ ಹೆಗಡೆ
----------------------------------
ಹಿಂಗಾರಿನ ತಾಳದ ಮಧುರ ಅನುರಾಗದಲಿ ಕೇತಕಿಯ ತೂಗುವ ಮಕರಂದದಲಿ ಕಾರ್ತಿಕ ದೀಪದ ಚಳಿಯುಸಿರಲಿ ಮುಂಗಾರು ಮರೆಯಾಯಿತು ಮಾಸಿದ ಮಾರುತದಲಿ ಬೀಸಿದ ಮರುಗಾಳಿಯಲಿ ಹಳೆಯ ಸಿಹಿ ನೋವಿನಲಿ ಅದು ಮಳೆಯಲ್ಲ, ಮೌನ ಬಿಸಿ ಏರುವಾಗ ಬಿದ್ದ ತಂಪು ಅಷ್ಟೇ! ಮನ ಮಾಸಿ ಹೋಗುವಾಗ ಸಿಕ್ಕ ನೆನಪು ಅಷ್ಟೇ!
----------------------------------
ನೋಂದಣಿ ಐಡಿ : KPFS2-9595