Submission 6288

ಅಸ್ಥಮಾನ

ರಚನೆ : ಅಬ್ದುಲ್ ಆಸೀಸ್

----------------------------------

ಅರಳಿದ ಹೂ ಪರಿಮಳವ ಕಳೆದಂತಿದೆ, ಶೋಭಿತ ನೇಸರನು ಬೆಳಕನು ಬಂಧಿಸಿದೆ, ಹಸಿ ಕಾಯಿಗಳು ಹಣ್ಣಾಗಿ ಬದಲಾಗಿದೆ, ನದಿಗಳು ಸೇರಿದವು ಮೌನದಲಿ ಸಾಗರದಿ... ಆ ಸಂಜೆಯ ಕಡುಕೆಂಪಿನೊಳು, ಕಳೆದು ಹೋದ ಕಾಲದ ಋತುಗಳು... ಅಳಿದು ಹೋದವು ಉಳಿಯದ ಹಾಗೆ ನೆಲೆಗಳು, ಒಣಗಿ ಹೋದ ಮರಗಳು,ಹಾರಾಡುವ ಹಕ್ಕಿಗಳು, ಈಜಾಡುವ ಮೀನುಗಳು, ಶಾಂತಿ ಗೀತೆಗಳೂ.... ಮಂದವಾದವು ಸೌಂದರ್ಯಗಳ ರಸಗಳು, ಕನಸಿನ ಸುಖಗಳು,ಮನದಾಸೆಗಳು,ಬಯಕೆಗಳು, ಆನಂದದ ಭ್ರಮೆಯು ನಿಂತು ಹೋದವು, ಬದುಕಿನ ಪ್ರೀತಿಯ ನೆನಪುಗಳು ಕೂಡಾ, ಅಸ್ಥಮಯವನು ಕಾದು ಈ ಲೋಕದೊಳು, ಸಾಗುತಿಹನು ಕೊನೆಯಿಲ್ಲದ ಬದುಕಿನೊಳು.

----------------------------------

ನೋಂದಣಿ ಐಡಿ : KPFS2-9476

0
Votes
91
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top