ಅಪ್ಪನ ನೆನಪು
ರಚನೆ : ರಾಮನಾಯ್ಕ್. ಡಿ
----------------------------------
ಅಪ್ಪಾ! ನಿನ್ನ ಕಿರು ಬೆರಳನ್ನೇ ಖಡ್ಗದಂತಿಡಿದು ಪುಟಪುಟನೆ ಓಡಾಡಿದ ಪುಟಾಣಿ ನೆನಪುಗಳು... ನಿನ್ನ ಹೆಗಲ ಮೇಲೆ ರಾಜನಂತೆ ಕೂತು ಸಂಭ್ರಮಿಸಿದ ರಾಜಗಾಂಭೀರ್ಯದ ರಮಣೀಯವಾದ ಕ್ಷಣಗಳು... ಶರ ವೇಗದಿ ಬಂದು ನಿಮ್ಮನ್ನು ಅಪ್ಪಿಕೊಂಡು ಅನುಭವಿಸಿದ ಅನರ್ಘ್ಯವಾದ ಅಪ್ಪುಗೆಗಳು... ನೆನಪಿನ ಕಣಜದಲ್ಲಿ ಇದ್ಯಾವ ನೆನಪುಗಳು ಉಳಿಯಲೇ ಇಲ್ಲವಲ್ಲಾ... ಯಾಕಪ್ಪಾ.. !? ಎನಗಿನ್ನು ಅರಿವು ಮೂಡುವ ಮುಂಚೆಯೇ ಕ್ರೂರ ವಿಧಿಯು ಕೊಂಚ ಕರುಣೆಯು ಇಲ್ಲದ ಕಠೋರನಂತೆ ಜಲಧಾರೆಯ ಬಲೆಯೊಳಗೆ ನಿಮ್ಮನ್ನು ಸಿಲುಕಿಸಿ ನಿಶ್ಯಬ್ದವಾಗಿಯೇ ಮುಳುಗಿಸಿ ಬಿಟ್ಟಿತ್ತಲ್ಲಪ್ಪಾ! ಹೇ!.. ಕ್ರೂರ ವಿಧಿಯೇ ನನ್ನ ಶಾಪವ ನಿನಗೆ ಸದಾ ಮೀಸಲಿಡುವೇ ಕೊನೆಯುಸಿರಿರುವ ತನಕ...
----------------------------------
ನೋಂದಣಿ ಐಡಿ : KPFS2-9479