ಸಾಗು ನೀ
ರಚನೆ : ಕನಕವಿಜ್ಜಿ
----------------------------------
ಕನಸುಗಳೇ ಇಲ್ಲದ ದಾರಿ ಬಲು ಮುನಿಸು, ನನಸಾಗುವುದೊ ಬಿಡುವುದೊ ಪ್ರೇರೇಪಿಸು, ಬರಿದಾದ ಮನಗಳಲಿ ನೆಲಸು. ಬದುಕಿಗೆ ಉತ್ಸಾಹ ಅರಸು.. ಫಳಫಳ ಹೊಳೆದಂತೆ ಹೊಂಗನಸು. ಮತ್ತೆ ಮೂಡಿರುವ ಕನಸು, ನೆರವೆರಿದರೆ ಸೊಗಸು ನನಸಾದಂತೆ ಬಾಳಿನಲಿ ಬಣ್ಣದ ಕನಸು. ಮನದಲಿ ನೂರಾರು ಆಸೆಗಳ ಆಗರ ಬಯಕೆಗಳಿಗೇನಿಲ್ಲ ಬರ ನಡೆಯುತಿದೆ ನದಿಯಂತೆ ಸರ ಸರ ಬದುಕುವ ಬದುಕು ಓಡುವುದು ಓಂಥರಾ ಸೇರುವುದೆಂತೇೂ ಸಾರ್ಥಕತೆಯ ಸಾಗರ.
----------------------------------
ನೋಂದಣಿ ಐಡಿ : KPFS2-9475