ಮನಸ್ಸು ಹೇಳಿದ ಪ್ರೀತಿ
ರಚನೆ : ಹೇಮಂತ್ ಕುಮಾರ್.ಎಂ.ಎಂ
----------------------------------
ಮನಸ್ಸು ಹೇಳುತ್ತಿದೆ, ಸುಮ್ಮನೇಕೆ ಅಂತೆಕಂತೆಗಳ ಚಿಂತೆ ಬದುಕನ್ನು ಜೀವಿಸು ಇಷ್ಟ ಬಂದಂತೆ, ನಗುವನ್ನು ಸ್ವೀಕರಿಸು ಹೂವಿನಂತೆ ದುಃಖಕ್ಕೆ ಜಗ್ಗದೇ, ಹೃದಯದಲ್ಲಿ ಶಾಂತಿಯ ತುಂಬು ಚಂದ್ರನಂತೆ, ಪ್ರತಿ ಕ್ಷಣವನ್ನು ಸವಿದು ಜೀವನವನ್ನು ನುಡಿಸು ಜೇನಿನಂತೆ.. ಮನಸ್ಸು ಹೇಳುತ್ತಿದೆ – ನಿನ್ನ ಪ್ರೀತಿಸಬೇಕೆಂತೆ, ಅ ಪ್ರೀತಿ ಸಾಧನೆಗೆ ಸ್ಫೂರ್ತಿ ಆಗಬೇಕೆಂತೆ. ಆದ್ರೆ ಮೊದಲು ಬೆಳಗಬೇಕು ಸೂರ್ಯನಂತೆ, ನಂತರ ಪ್ರೀತಿ ಮತ್ತು ಸಂತೋಷ ತಾನಾಗೆ ಬರುವುದಂತೆ... ಮನಸ್ಸು ಹೇಳುತ್ತಿದೆ, ನೀನು ನನಗೆ ಸಿಕ್ಕ ಅದ್ಭುತವಂತೆ, ಅದಕೆ ಕಾರಣ ನೀ ಸಿಕ್ಕ ಸಮಯವಂತೆ,. ನಿನ್ನ ನಗು ಮಲ್ಲಿಗೆಯಂತೆ... ಇದು ನೋಡಿ ನಾ ಕರಗುವೆ ಮಂಜುಗಡ್ಡೆಯಂತೆ... ಪ್ರೀತಿಸಲು ಕ್ಷಣ ಸಾಕಂತೆ, ಜೊತೆಯಾಗಲು ಋಣ ಬೇಕಂತೆ, ಮದುವೆಯಾದ ಮೇಲೆ ಜೀವನವೇ ಬೇಡ್ವಂತೆ.
----------------------------------
ನೋಂದಣಿ ಐಡಿ : KPFS2-9444