Submission 6248

ಸಾಲುಮರದ ತಿಮ್ಮಕ್ಕ

ರಚನೆ : ನಾಗಪ್ಪ ಕುಂಬಾರ

----------------------------------

ಸಾಲುಮರದ ತಿಮ್ಮಕ್ಕ ನೀನು ಬಹಳ ಗಟ್ಟಿಗಿತ್ತಿ ಕಡು ಬಡತನದಲ್ಲಿ ಹುಟ್ಟಿ ತಡೆಯಲಾರದ ಕಷ್ಟಗಳನ್ನು ಪಟ್ಟಿ ಮಕ್ಕಳಿಲ್ಲದೆ ಕೊರಗಿ ಬಿಟ್ಟಿ ಮಕ್ಕಳಿಲ್ಲದ ಕೊರಗನ್ನು ಕೈಬಿಟ್ಟಿ ಸಾಲಾಗಿ ಮರಗಳನ್ನು ನೀ ನೆಟ್ಟಿ ಮರಗಳಿಗೂ ಮಾತೆಯಾಗಿ ಬಿಟ್ಟಿ ಹಿರಿದಾದ ಮರಗಳನ್ನು ಕೊಟ್ಟಿ ನಮ್ಮನ್ನು ಸದಾನೆರಳಲ್ಲಿ ಇಟ್ಟಿ ಶಾಶ್ವತವಾಗಿ ಉಳಿದು ಬಿಟ್ಟಿ ಮನಕ್ಕೆ ಮಾದರಿಯಾದೆ ಗಟ್ಟಿ ಪ್ರಶಸ್ತಿಗಳು ಬಂದವು ಬುಟ್ಟಿ ಪೂಜಿಸಬೇಕು ನಿಮ್ಮನ್ನು ಗುಡಿಯೊಂದನ್ನು ಕಟ್ಟಿ

----------------------------------

ನೋಂದಣಿ ಐಡಿ : KPFS2-9443

0
Votes
90
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top