Submission 6194

ಮನುಕುಲದ ಮಹಲುಗಳ ಕಟ್ಟೋಣ...

ರಚನೆ : ವೀರೇಶ ಗೋನವಾರ

----------------------------------

ಭೂಮಿ ಮೇಲಿನ ಸ್ವರ್ಗವೀಗ ನರಕವಾಗಿದೆ ಹಚ್ಚಹಸಿರಿನ ಎಲೆಗಳಿಗೆ ನೆತ್ತರು ಮೆತ್ತಿದೆ. ಯಾರದೋ ತಪ್ಪು... ಇನ್ಯಾರಿಗೋ ಶಿಕ್ಷೆ...!? ಅಪಹಪಿಸಿದರೂ ಬಿಡದ ದುರುಳರು. ತಲೆ, ಕುತ್ತಿಗೆ ಸಿಕ್ಕ ಸಿಕ್ಕಲ್ಲೆಲ್ಲಾ ಗುಂಡಿನ ಮಳೆ. ಯಾಕೆ ಈ ಕಾಶ್ಮೀರದ ಇಳೆಯಲ್ಲಿ ಇಂತಹ ಬೆಳೆ? ‘ಅಮ್ಮಿ ಪಪ್ಪಾ ಕಾಂಹ ಹೈಂ' ಎಂದು ಕಂದಮ್ಮ ಕೇಳಿದ ಈ ಪ್ರಶ್ನೆಗೆ ಅಮ್ಮನ ಬಳಿ ಉತ್ತರವೇ ಇಲ್ಲ. ನೀವಾದರೂ ಹೇಳಿ, ಅವನ ಅಪ್ಪ ಎಲ್ಲಿದ್ದಾನೆಂದು? ಕುಣಿದು ಕುಪ್ಪಳಿಸಿ, ನಲಿದಾಡಿದ ಮನಸ್ಸುಗಳೀಗ ನೀರವ ಮೌನಕ್ಕೆ ಜಾರಿವೆ. ಇತ್ತ ‘ಬಾಯಿ'ಬಡುಕರು ಇನ್ನೂ ಬಾಯಿ ಮುಚ್ಚಿಲ್ಲ. ಕಣ್ಣ ಮುಂದೆ ಬಾಳ ಸಂಗಾತಿಯನ್ನು ಕಳೆದುಕೊಂಡ ಸಹೋದರಿಯರನ್ನು ಸಂತೈಸೋಣ ಬನ್ನಿ. ಜಾತಿ, ಧರ್ಮ ಗೊಡವೆಗಳ ಗೋಡೆ ಕೆಡವಿ ಮನುಕುಲದ ಮಹಲುಗಳ ಕಟ್ಟೋಣ ಬನ್ನಿ.

----------------------------------

ನೋಂದಣಿ ಐಡಿ : KPFS2-9392

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top