ರಾಧೆಯ ಸ್ವಗತ
ರಚನೆ : ಸಿಂಚನ ಕೆ
----------------------------------
ಒಂದೆಡೆ ರುಕ್ಮಿಣಿ, ಇನ್ನೊಂದೆಡೆ ಸತ್ಯಭಾಮೆ ಎದುರೆಲ್ಲ ಗೋಪಿಕಾಸ್ತ್ರೀಯರಿದ್ದರೇನು ಗೋಪಾಲ ನಿನ್ನೊಲವ ರಾಯಭಾರಿ ನಾನಲ್ಲವೇ ಕೂಡಿ ಬಾಳದಿರೇನಂತೆ ಮಾಧವ ನೀ ನುಡಿಸುವ ಕೊಳಲಿಂದ ಹೊರಹೊಮ್ಮುವ ನಾದದಲ್ಲಿ ನಾ ಬೆರೆತಿರುವೆ ಜೊತೆ ಸಾಗದಿರೇನಂತೆ ಮೋಹನ ನಿನ್ನ ಕಿರೀಟದ ನವಿಲಗರಿಯ ಕಣ್ಣಲ್ಲಿ ನಾನಿರುವೆ ನಿನ್ನ ಸಹಚರವೇ ನಾನಾಗಿರುವೆ ದೇಹಗಳು ದೂರಾದರೂ ಮನಗಳು ಒಂದಾಗಿಹುದಲ್ಲ ಆತ್ಮಗಳು ಎಂದೋ ಸಂಧಿಸಿಹುದಲ್ಲ ಸಾಕಿಷ್ಟು ಈ ಜನುಮಕ್ಕೆ
----------------------------------
ನೋಂದಣಿ ಐಡಿ : KPFS2-9391