ಕೆವಲ ಕನಸು
ರಚನೆ : ವಿನುತ ಶ್ರೀನಾಥ್
----------------------------------
ದೂರ ಊರೆಂದು ತೊರೆದರು ನಕ್ಷೆಯಾಗುವ ಭರವಸೆ ಕೊಟ್ಟವನು ಹೃದಯದೂರಿನ ಬೆಳಕ ಆರಿಸಿಬಿಟ್ಟ ಶುರುವಾಗುವ ಮುನ್ನ ಅಂತ್ಯವಾಡಿದ ಮತ್ತೆಂದೂ ಭರವಸೆಯ ನೆನೆಯದಂತೆ ಮನಸ ಚೂರುಚೂರು ಮಾಡಿಬಿಟ್ಟ ಚಿಗುರೊ ಮುನ್ನ ಕನಸ ಕೊಂದುಬಿಟ್ಟ ಸಾಗುವ ದಾರಿಯಲಿ ಭಯವಕೊಟ್ಟ ಹೆಜ್ಜೆ ಹೆಜ್ಜೆಗೂ ಸಾಗುವ ಆಸೆಗೆ ಹೃದಯ ಕೊರೆವಂತ ನಿರಾಗಿಬಿಟ್ಟ ಹಾರುವ ಮನಸಿನ ರೆಕ್ಕೆಮುರಿದುಬಿಟ್ಟ ಕೊಟ್ಟಂತೆ ನಟಿಸಿ ಉಸಿರು ನಿಲ್ಲಿಸಿಬಿಟ್ಟ ಎಲ್ಲವವು ಅವನಿಚ್ಚೆ ಈಗ ಬರಿ ನೋವೆ ಕಟ್ಟಿ ಕೊಟ್ಟು ಕಾಣದಂತೆ ಮರೆಯಾಗಿಬಿಟ್ಟ
----------------------------------
ನೋಂದಣಿ ಐಡಿ : KPFS2-9058