Submission 5752

ಬಾಳಿಕೊ

ರಚನೆ : ಎನ್ ಜೆ ರವಿಶೇಖರ ರಾಜಮಗ

----------------------------------

ಆಳುವಂಥಾ ಆಸೆ ಇದ್ದರೆ ಆಳಿಕೊಳ್ಳೋ ನಿನ್ನನೇ! ನಿನ್ನ ನೀನೇ ಹಿಡಿದು ಪಳಗಿಸಿ ಬಾಳಿಕೊಳ್ಳೋ ಸುಮ್ಮನೇ! ಇವನು ಹಾಗೆ ಅವನು ಹಾಗೆ ಅವರಿವರದೇ ಯೋಚನೆ!? ನೀನು ಹೇಗೆ ಏನು ಎಂತು ಮಾಡಬಾರದೆ ಚಿಂತನೆ!? ಯಾರ ಹಾಗೆ ಯಾರೂ ಇಲ್ಲ ನೀನು ನಿನ್ನದೇ ಕಲ್ಪನೆ! ಯಾರ ಹಾಗೂ ಇರದೇ ಹೋದರೆ ಪಡೆವೆ ನೀನು ನಿನ್ನನೇ! ಹಾಗೆ ಹೀಗೆ ಆಡಿಕೊಳುವರು ಮೂರ್ಖ ಜನಗಳು ಸುಮ್ಮನೇ! ಆಡಿಕೊಳುವರು ಅನ್ನ ಕೊಡುವರೇ ಆಡದಂತಿರು ಕಮ್ಮನೆ! ನಿನ್ನ ನೀನು ಅರಿತುಕೊಳ್ಳುವ ಕಲೆಯ ಕಲಿತುಕೊ ಜಾಣನೇ! ಕಲಿತ ಕಲೆಯ ಬೆಲೆಗೆ ಮಾರದೆ ಸಾರಿ ಬಾಳಿಕೊ ಜ್ಞಾತನೇ! ಯಾವ ಘಳಿಗೆಗೆ ಹಾರಿ ಬಿಡುವುದೋ 'ನಾನು' ಎಂಬೀ ವಾಸನೆ 'ನಾನು' ಹೋದರೆ ನೀನು ಗತಿಸದೆ ಅಜರಾಮರಿಸು ನಿನ್ನನೇ!

----------------------------------

ನೋಂದಣಿ ಐಡಿ : KPFS2-9057

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top