ಸಿಧ್ಧ
ರಚನೆ : ಚರಣರಾಜ ಚೌಡಾಪೂರ
----------------------------------
ಸಮಾಜದ ಸುಧಾರಣೆಗೆ ತತ್ವವ ಸಾರಿದವರ... ಶೂಲಕೆ ಕಟ್ಟಿದರು ಮುಳ್ಳಿನ ಕಿರೀಟ ತೊಡಿಸಿ. ಕಾಯದಿ....ದೇವರ ಕಂಡವರ ಅರಿಯದೆ ಹೊಳೆಗೆ ನೂಕಿ ಕೈಮುಗಿದು ನಿಂತರು. ಕುಲ-ಕುಲ ಎಂಬುದರ ನೆಲೆಯ ಕೇಳಿದವರ ಒಳಗೆ ಬಿಡದೆ ಕಿಂಡಿಯಲಿ ಕಾಣುತಿಹರು! ಇದೇನು ಹೊಸತಲ್ಲ ನಾನು ಎಲ್ಲದಕ್ಕೂ ಸಿಧ್ಧ
----------------------------------
ನೋಂದಣಿ ಐಡಿ : KPFS2-9060