Submission 5494

ಬದುಕಿನ ಬೆಲೆ

ರಚನೆ : ಸುಖೀ

----------------------------------

ಸೋಲೇ ನೀ ಬರದಿರೆ;ಈ ಗೆಲುವಿಗೆಲ್ಲಿ ಬೆಲೆ ಅವಮಾನ ನೀ ಅಂದು ನನ್ನ ಪಾಲಿಗಿರಿದಿರೆ ಬದುಕಿನ ಸನ್ಮಮಾನಕೆಲ್ಲಿ ವಿಜೃಂಭಣೆ ಅಣಕಿಸುವವರು ಸಿಗದಿರೆ ಪ್ರೋತ್ಸಾಹಿಸುವವರಿಗೆಲ್ಲಿ ಬೆಲೆ ಬಾಳಲ್ಲಿ ಸಾವುಬಂದೆರಗದಿರೆ ಹುಟ್ಟಿಗೆಲ್ಲಿ ಸಂತಸದ ಮನ್ನಣೆ ನಿಂದಿಡಿಸಿ ಕುಗ್ಗಿಸಿ ಕುಸಿಯುವಂತೆ ಮಾಡದವರಿರೆ ಪೋಷಿಸಿ ಪ್ರೋತ್ಸಾಹಿಸಿ ರಕಿಸುವರಿಗೆಲ್ಲಿ ಬೆಲೆ ದ್ವೇಷದ ಕಾವು ಬದುಕಲ್ಲಿ ಕಾಪಿಡದಿರೆ ಪ್ರೀತಯ ಸವಿಗೆಲ್ಲಿತ್ತು ಸುಖ ಹಸಿವೆಂಬ ಉದರದ ಮಹಾ ಬೇನೆ ಬರದಿರೆ ಸವಿಯುವ ಮೃಷ್ಟಾನ್ನಕ್ಕೆಲ್ಲಿತ್ತು ಬೆಲೆ ರೋಗವಾವರಿಸಿ ಘಟವ ಗಾಸಿಗೊಳಿಸದಿರೆ ನಳನಳಿಸುವ ಆರೋಗ್ಯಕ್ಕೆಲ್ಲಿ ಮಹಾ ನೆಲೆ ಮಣ್ಣಿನಿಂದ ಹೊನ್ನತೆಗೆಯದ ರೈತನಿರೇ ಭಗವಂತ ನಿನ್ನ ನೆಲೆಗೆಲ್ಲಿ ಬೆಲೆ

----------------------------------

ನೋಂದಣಿ ಐಡಿ : KPFS2-8882

0
Votes
76
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top