Submission 5496

ನನ್ನೆದುರಲಿ ನೀನಿರಲು

ರಚನೆ : ಶಂಕರ ಎನ್ ಟಿ

----------------------------------

ನನ್ನೆದುರಲಿ ನೀನಿರಲು ಗೆಳತಿ ಹೃದಯ ಕೇಳುತಿದೆ ನಿನ್ನ ಮನದ ಮಾತನು ಒಲವ ಬಲೆಯಲಿ ಮಾಯವಾಗಿದೆ ನನ್ನ ಗಮನವು ಎಷ್ಟು ಕರೆಯಲಿ ನಿನ್ನಯ ಮುದ್ದು ಹೆಸರ ಕನಸೇಂಬ ಸವಿಗನಸು ನಿನ್ನದು ಕಲ್ಪನೆಯ ಭಾವಕೆ ಜೀವ ನಿನ್ನದು ಅನುರಾಗದ ಪಯಣದಲಿ ಮೂಡಿರೋ ಹೆಜ್ಜೆ ನಿನ್ನದು ಮೌನದ ಗಗನದಲಿ ತಾರೆಗಳ ನಗುವು ನಿನ್ನದು ಮನದಾಳದಿ ಜೊತೆಯಾಗಿ ನಾ ನಡೆವ ಭಾವ ನಿನ್ನದು ಸ್ಪರ್ಶದ ಪರಿವಿಲ್ಲದೆ ನಾ ಹಿಡಿದ ಕಿರುಬೆರಳು ನಿನ್ನದು ಅಂತಿಮವಲ್ಲದ ಕ್ಷಣದಲಿ, ನನ್ನ ನಯನ ನೋಡುವ ಮುದ್ದು ಮೂಗುತಿಯ ಚೆಲುವು ನಿನ್ನದಾಗಿದೆ ಗೆಳತಿ ನಿನ್ನ ಮನಸ್ಸಿನ ಇಂಚರವಾಗಿ ನಾನಿರುವೆ ನನ್ನೆದುರಲಿ ನೀನಿರಲು ಗೆಳತಿ

----------------------------------

ನೋಂದಣಿ ಐಡಿ : KPFS2-8884

0
Votes
89
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top