ಪರಮಾತ್ಮನೆಂಬುವನು
ರಚನೆ : ರಘು.ಎ
----------------------------------
ಸಮಷ್ಟಿಯಾದ್ಯಂತ ಅಸಮತೋಲನದ ಗೋಷ್ಠಿಯ ಕಾಣ್ವ ವಿಹ್ವಲತಪ್ತ ಮನವು ಕೇಳುವುದು ಆ ಪರಮಾತ್ಮನೆಲ್ಲಿಹನು? ಆಗ್ಗೇ, ಅಂತರ್ದನಿಯೊಂದು ಸೃಷ್ಟಿತರಂಗದೆ ಬೆಸೆದು ನುಡಿವುದು ಗಂಗೆಯ ತಿಳಿನೀರ ತಾರೆಗಳ ಪ್ರತಿಫಲನವಾಗಿ ಮಿನುಗುತಿಹೆನು ಸ್ವಾತಿಮಳೆಯ ಕಸುವಿಗೆ ಕಟ್ಟಿದ ಭತ್ತದೊಳಗಣ ಹಾಲಾಗಿಹೆನು ಮೃಗ ಖಗಗಳ ಎದೆಯ ಏರಿಳಿತದ ಹಂಸೋತ್ತಮ ಉಸಿರಾಗಿಹೆನು ಉರಿವ ಚಿತೆಗೆ ಸೋಕಿದ ಗಾಳಿಗೆದ್ದ ಕಿಡಿಯ ಕಣಕಣದಿಹೆನು ತೊದಲು ಕಂದನ ಕೆಂದುಟಿಯ ಹೊಳೆವ ಬಿಂದುವಲ್ಲಿಹೆನು ಹುಂಬ ಜಂಭದ ನಿನ್ನ ಅಮಿತೋತ್ಸಾಹದ ಚೈತನ್ಯವಾಗಿಹೆನು ಮನಜರೀರ್ವರ ನಡುವ ಗೌರವಾದರದಿ ಮೂರ್ತವಾಗಿಹೆನು ಕರ್ಮಾಧರ್ಮಕೆ ಅಂಟಿ ಮಿಡಿವ ನಿನ್ನೆದೆ ಧಮನಿಯಾಗಿಹೆನು ಇಹಪರ ಚರಾಚರವೆಣಿಸುವ ನಿನ್ನ ಪ್ರಜ್ಞೆಯ ಮೂಲಪ್ರಜ್ಞೆಯೇ ನಾನು ನೀನು ಬೇರಲ್ಲ ನಾನೂ ಬೇರಲ್ಲ ನನ್ನದೇ ಕನ್ನಡಿಯ ಬಿಂಬ ನೀನು ಚಿತ್ತಶುದ್ಧಿಯಲಿ ಅಂತರಾತ್ಮನ ಹೊಂಬೆಳಕಲಿ ನಿನ್ನೊಳಗೇ ನೀ ಕಾಣು..
----------------------------------
ನೋಂದಣಿ ಐಡಿ : KPFS2-8881