ತಾಯಿ
ರಚನೆ : ಶಿವಶಂಕರಯ್ಯ ಎಂ ಹಿರೇಮಠ
----------------------------------
ವಜ್ರಕವಚವಾಗಿತ್ತು ನನಗೆ ಆ ಮನೆ, ಕರುಳ ಬಳ್ಳಿಗಳೇ ನನಗೆ ಆಟಿಕೆ, ಕಣ್ಣು ತೆರೆಯದಲೆ ಕಾಣುತಿದ್ದೆ ಈ ಜಗದ ನೆಲೆ, ಮರೆತರು ಜ್ಞಾಪಿಸುತಿದೆ ನನ್ನವರಾರಿಲ್ಲ ಅಲ್ಲಿ ಅವಳನೋಬ್ಬಳ ಬಿಟ್ಟರೆ, ಆಗಾಗ ಸೇಳೆಯುತಿತ್ತು ಜನಕನ ಗುಂಡಿಗೆ, ಅವಳ ಉಸಿರು ನನ್ನದಾದ ಆ ಸುಮಧುರ ಘಳಿಗೆ, ಕಾತರದಿ ಕಾದಿದ್ದೆ ಧನ್ಯವಾದ ಹೇಳಲು ಕತೃರಿಗೆ
----------------------------------
ನೋಂದಣಿ ಐಡಿ : KPFS2-8868