ಸ್ತ್ರೀ
ರಚನೆ : ಮೌನ ಗೌರಿ ಪುಷ್ಪ
----------------------------------
ಅವಳು ಪ್ರಕೃತಿ ಎಲ್ಲೆಡೆ ಸ್ವೀಕೃತಿ ಅವರ್ಣನೀಯವಾದ ಮೇರು ಕೃತಿ ಭಾಷೆ ಬಡವಾಗಬಹುದು ಬಣ್ಣಿಸಹೋದರೆ ಅವಳೆಲ್ಲ ಪಾತ್ರದ ಸ್ಥಿತಿಗತಿ. ಬದುಕ ಬೆಳಗಲು ನಿಂತರೆ ಮರುಭೂಮಿಗೂ ಮಳೆಗರೆವ ಛಲಗಾತಿ ಮುನಿದು ಕೆರಳಿದರೆ ದಹಿಸುವ ಜ್ವಾಲಾಮುಖಿ ಸಹನೆ ಸಹಿಷ್ಣತೆಯಲಿ ಅವಳು ಅವನಿ ಒಡಲ ಪೊರೆವ ಜೀವದಾತೆ ಜನನಿ ಅವಳಿಲ್ಲದ ಜಗ ಶೂನ್ಯ ಸೃಷ್ಟಿಯಲಿ ' ಸ್ತ್ರೀ' ನೀ ಅಗ್ರಮಾನ್ಯ.
----------------------------------
ನೋಂದಣಿ ಐಡಿ : KPFS2-8860