ಸಾಗು
ರಚನೆ : ಸತೀಶ್ ಕುಮಾರ್ ಪಿ
----------------------------------
ಕತ್ತಲಿನ ಮೌನದಲ್ಲಿ ಬೆಳಕು ಮೂಡಬೇಕಿದೆ ಮೌನವಾದ ಮನಸಿನಲ್ಲಿ ಭರವಸೆಯ ಹೂ ಅರಳಬೇಕಿದೆ ಹರಿಯುವ ನದಿಯಾಗಬೇಕು ಬದುಕು ಇಳೆಯ ಬಾಳಲಿ ನಿಂತ ನೆಲವ ಕದಲದೊಡೆ ನಿಲುಗಡೆಗೆ ಅರ್ಥವೆಲ್ಲಿ ಸುಖ ದುಖಃದ ತಂಗುದಾಣ ನೆಲೆಯಾಗಲು ಅಲ್ಲ ಕೊನೆಯಾಗುವ ದಾರಿಗಳು ಬದುಕುಗಳಿಗೆ ಇಲ್ಲ ದಾರಿಗಂಟಿ ಸವೆಯಬೇಕು ಸವೆಸುತ ಸವಿ ಘಳಿಗೆಗಳ ಮರೆವ ಮರೆತು ಮರೆಯಬೇಕು ಕಳೆದ ಕಹಿಯ ಘಟನೆಗಳ
----------------------------------
ನೋಂದಣಿ ಐಡಿ : KPFS2-8863