ಬಾಲ್ಯದ ಸ್ನೇಹ
ರಚನೆ : ದೇವೇಂದ್ರಪ್ಪ ವೈ ಬಿ
----------------------------------
ತೊದಲು ನುಡಿನುಡಿಯುವಾಗಲೇ ಮೊದಲು ಸ್ನೇಹಿತರಾದವರು ಅವರು ಅದಲು -ಬದಲು ಮಾಡಿ ತಟ್ಟೆಯ ಊಟ ಖಾಲಿಯಾಗಿತ್ತು ಗದ್ದಲದ ನಡುವೆಯೂ ಸುಖ ಸ್ನೇಹ ವಿತ್ತು. ಹೇ ಒಡನಾಡಿಗಳೇ ಎಲ್ಲಿ ಮರೆಯಾದಿರಿ ನೀವು ಈ ಬಡ ಹೃದಯಕೆ ಬೇಕಾಗಿದೆ ಮತ್ತೆ ನಿಮ್ಮ ಸಾಂಗತ್ಯ ಸ್ನೇಹದ ಅಗತ್ಯ ಮತ್ತೊಮ್ಮೆ ಆಡಬೇಕಾಗಿದೆ ಹಳೆಯ ಆಟಗಳ ಹೇಳ ಬೇಕಿದೆ ಹೇಳದೆ ಉಳಿದ ಮಾತುಗಳ ಮತ್ತೊಮ್ಮೆಬೇಕಾಗಿದೆ ಬಾಲ್ಯ ಮಗದೊಮ್ಮೆ ಬೇಕಾಗಿದೆ ನಮ್ಮ ಮುಗಿಯದ ಸ್ನೇಹ
----------------------------------
ನೋಂದಣಿ ಐಡಿ : KPFS2-8854