ನನ್ನವಳು
ರಚನೆ : ಪಾರ್ಥ
----------------------------------
ನಿಷ್ಕಲ್ಮಶ ನಿರ್ಮಲ ಮನಸ್ಸಿನ ನಂದಾದೀಪ ನಕಾರಾತ್ಮಕವೇ ನಶ್ವರವಾಗುವಂತಹ ನಾರಾಯಣಿ ಸ್ವರೂಪ ನಿಸರ್ಗ ನಾಚುವಂತಹ ನಾರಿ ನನ್ನವಳು ಅಪರೂಪ ಕನಸಲ್ಲಿಯೂ ನನಸಾಗಿಯೇ ಉಳಿಯುತ್ತೆ ನನ್ನಾಕೆಯ ನೆನಪಿನ ಕೂಪ...... ನನ್ನವಳು ನೋಡುತ್ತಲೇ ಇರುವಂತ ನಂಜು ನಶೆಯ ಶಾಪ ನೈರ್ಮಲ್ಯ ನೆರಳು ಅವಳು ಕಾವೇರಿಯ ಪ್ರತಿರೂಪ ನಿಮ್ಮದಿಯ ನಿಧಿ ನನ್ನವಳು ಪಡೆಯಲು ಮಾಡಿರುವೆ ಜಪ ತಪ ನಲ್ಮೆಯ ನಾಯಕಿಯ ನೊಂದಾಯಿಸಿಕೊಂಡಿರುವ ನಾನೇ ಭಲೇ ಭೂಪ..... ನೀನಿಲ್ಲದಿದ್ದರೆ ಅಜ್ಞಾತವಾಸದಂತೆ ಅಲಿಯಬೇಕಿತ್ತು ಕಾನನ ಬೇರೆಲ್ಲದರ ಭಾವ ಮೂಡಿಸಿದ ನಿನ್ನ ಮನ ಅದುವೇ ನೂತನ ನಿನ್ನ ಅನುದಾನವಿಲ್ಲದ ಅಭಿಮಾನಿ ನಾ ನಿನ್ನ ಮುದ್ದು ಆಚರಣೆ ಇಲ್ಲದ ಆಹ್ವಾನ ನನ್ನವಳೇ ಕೇಳು ಈ ಜೀವ ನಿನ್ನಲ್ಲಿಯೇ ಅಧೀನ....
----------------------------------
ನೋಂದಣಿ ಐಡಿ : KPFS2-8853