Submission 5456

ರಾಧೆಯಿಲ್ಲದ ಶ್ಯಾಮನ

ರಚನೆ : ರಾಮಮೂರ್ತಿ ಸೋಮನಹಳ್ಳಿ

----------------------------------

ರಾಧೆಯಿಲ್ಲದ ಶ್ಯಾಮನ ಜಗದೊಳಗೆ ಹುಡುಕುವೆಯೇಕೆ ರಾಧೆಗಾಗಿಯೇ ಜನಿಸಿಹೆನೆಂಬ ಸತ್ಯವನು ಮರೆತೆಯೇಕೆ ಪರಿಶುದ್ಧ ನಮ್ಮೀ ಪ್ರೇಮ ಬಲುಮಧುರ ರಾಧಾಕೃಷ್ಣನ ಪ್ರೇಮಗಾಥೆ ಸದಾ ಅಮರ ||೧|| ಚಿಂತೆಯಾ ಚಿತೆಯಲಿ ನೀನೇಕೆ ಬಳಲುವೆ ಬಿಡು ವಿರಹದಾ ನೋವ ನಿನ್ನೊಳಗೇ ಲೀನನಾಗಿರುವೆ ರಾಧೆಯಿಲ್ಲದ ಮಾಧವನ ಇನ್ನೆಲ್ಲಿ ಕಾಣುವೆ ನಿನ್ನೊಲವಿನಾ ಪಂಜರದಿ ನಾ ಬಂಧಿಯಾಗಿರುವೆ ||೨|| ನಿನ್ನ ಬಳಿ ನಾನಿಲ್ಲವೆಂದು ಮುನಿಸು ತೋರುವುದೇಕೆ ನಿನ್ನೀ ಹೃದಯ ಚಿತ್ತ ಚೋರನ ದೂರುವುದೇಕೆ ವಿರಹಾಗ್ನಿಯಲಿ ಬೆಂದು ಕಣ್ಣೀರು ಸುರಿಸುವುದೇಕೆ ನಿನ್ನೊಳಗಿಹ ಕೃಷ್ಣನ ಕಾಣದೆ ಮರುಗುವುದೇಕೆ ||೩|| ಮುರಳಿಯು ನಾನು, ಮುರಳಿಯ ಗಾನವೇ ನೀನು ನಿನ್ನುಸಿರ ಉಸಿರಾಗಿಹ ರಾಧಾಶ್ಯಾಮನು ನಾನು ನಿನ್ನೊಳಗೇ ನಾನಿರುವಾಗ ವಿರಹ ಕಾಡುವುದೇನು ಬಿಡು ಭ್ರಮೆಯ ರಾಧೆ ಬಳಿಯಿರುವೆ ನಾನು ||೪||

----------------------------------

ನೋಂದಣಿ ಐಡಿ : KPFS2-8855

0
Votes
89
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top