Submission 5366

ಕಾಯಕಯೋಗಿ

ರಚನೆ : ವಿರಾಜ್ ಆಡೂರು, ಕಾಸರಗೋಡು

----------------------------------

ಕೊಡುಗೆಯೇನು ಕೊಡಲಿ ನಾನು ಅನ್ನದಾತಗೆ ದೇಶಕೊಬ್ಬ ನಾಥನಾತ ಹೆಮ್ಮೆ ಜನತೆಗೆ ಉತ್ತು, ಬಿತ್ತಿ ಫಸಲು ಬೆಳೆಸಿ ದೇಶದುಸಿರನು ಉಳಿಸಿ, ತಾನು ಬೆಳೆದು, ಜನರ ಬೆಳೆಸುತಿರುವನು ಮಣ್ಣಿನಲ್ಲಿ ಹೊನ್ನಿನಂಥ ಬೆಳೆಯ ಬೆಳೆವನು ತಾನು ತಿಂದು, ಉಳಿದ ದವಸ ಜಗಕೆ ಕೊಡುವನು ಕೃಷಿಯೆ ದೇವ, ದುಡಿಮೆ ಪೂಜೆ ಎಂದು ತಿಳಿವನು ಯಂತ್ರದಂತೆ ದುಡಿದು ಬಳಲಿ ಸಿಹಿಯ ಕೊಡುವನು ಕೆಸರು ಮೆತ್ತಿಕೊಂಡು ರೈತ ಬೆವರ ಸುರಿಸಿಹ ಒಲುಮೆಯಿಂದ ಹಸಿರು ಬೆಳೆಸಿ ದೇವನಾಗಿಹ ಕೃಷಿಕ ತಾನು ತಿರುಕನಲ್ಲ. ಸ್ವಾವಲಂಬಿಯು ಸ್ವಾರ್ಥ ಮರೆತು, ಜಗವ ಪೊರೆವ ಸಿದ್ಧಯೋಗಿಯು ಭಕ್ತಿಯಿಂದ ತೀರಿಸುವನು ಬುವಿಯ ಋಣವನು ಭೂಮಾತೆಯ ಸೇವೆ ಮಾಡಿ ಧನ್ಯನಾದನು

----------------------------------

ನೋಂದಣಿ ಐಡಿ : KPFS2-8797

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top