ಓಂಕಾರ ಧ್ಯಾನ
ರಚನೆ : ಮುಕ್ತ ರಂಗನ್
----------------------------------
ಓಂಕಾರ ಪ್ರಣವ ಸ್ವರೂಪ ಅಂತರಂಗದ ಬೆಳಕಿನ ನಂದಾದೀಪ, ಮಾರ್ದನಿಸುತ್ತಿರಲಿ ಎನ್ನ ಹೃನ್ಮನದಲಿ ನೆಲೆಸಿರಲಿ ಮನವೆಂದು ಶಾಂತಿಯಲ್ಲಿ, ದೇವತಾ ಉಪಾಸನೆಯ ಪ್ರಾರ್ಥನೆ ಜೀವಕ್ಕೆಂದು ನೀಡುವುದು ದಿವ್ಯಾನುಭೂತಿ, ಭಕ್ತಿಯ ಕರೆಗೆ ಓಗೊಟ್ಟು ಭಗವಂತ ಧರೆಗಿಳಿಯುವುದು ಪ್ರತೀತಿ, ಕೃಪಾಸಿಂಧು ಕಾರುಣ್ಯ ರೂಪನೇ ನನ್ನಾತ್ಮವೆ ನಿನ್ನ ಪುಣ್ಯಸನ್ನಿಧಾನ, ಎನ್ನ ಆಂತರ್ಯದಿಂದ ಸದಾ ಹೊರಹೊಮ್ಮುತಿರಲಿ ಓಂಕಾರ ಧ್ಯಾನ, ಧ್ಯಾನದಿಂದಲೇ ದೊರಕುವುದು ನೆಮ್ಮದಿ, ಮಾನಸಿಕನೆಮ್ಮದಿಯೆ ಬಾಳಿಗೆ ದಿವ್ಯಔಷಧಿ...
----------------------------------
ನೋಂದಣಿ ಐಡಿ : KPFS2-8796