ವೈದ್ಯರು
ರಚನೆ : ಸುಧಾಕರ ವಿ ನಿಂಬಾಳ
----------------------------------
ರೋಗಿಗಳ ಜೀವ ಉಳಿಸುವವರೇ ವೈದ್ಯರು. ವೈದ್ಯಕೀಯ ವೃತ್ತಿಯಲ್ಲಿ ಶಿಕ್ಷಣ ನೀಡುವ ಶಿಕ್ಷಕರು. ರೋಗಿಗೆ ಚಿಕಿತ್ಸೆ ಮೂಲಕ ರೋಗರಕ್ಷಣೆ ನೀಡುವ ಸೈನಿಕರು. ಜೀವನವೇ ಮುಗಿತುಯೆನ್ನುವವರಿಗೆ ಹೊಸ ಅಧ್ಯಾಯ ಬರೆಯುವ ಬರಹಗಾರರು. ತಮ್ಮ ಪ್ರಾಣ ಲೆಕ್ಕಿಸದೆ ಹಗಲೂರಾತ್ರಿ ಸೇವೆ ಸಲ್ಲಿಸುವ ಸ್ವಯಂ ಸೇವಕರು. ರೋಗದ ಮೂಲರೂಪವನ್ನು ಕಂಡು ಹಿಡಿಯುವ ಸಂಶೋಧನಕಾರರು. ಮುದ್ದು ಪುಟಾಣಿಗಳಿಗೆ ನಲಿವಿನಿಂದ ಚಿಕಿತ್ಸೆ ನೀಡುವ ಪೋಷಕರು. ಈ ಸಮಾಜದ ಬೆಳವಣಿಗೆಯ ಸಮಾರಂಭಗಳಲ್ಲಿ ನೀವೇ ಗಣ್ಯರು. ಎಲ್ಲ ರೋಗಿಗಳ ಮನದಾಳದಲ್ಲಿ ವೈದ್ಯಗಳೇ ದೇವರು. ಹೆಮ್ಮೆಯಿಂದ ವೈದ್ಯರೆಂದು ಕರೆಸಿಕ್ಕೊಳ್ಳುವವರೆ ನಾವೇ ಪುಣ್ಯರು.
----------------------------------
ನೋಂದಣಿ ಐಡಿ : KPFS2-8798