Submission 5226

ನಾ ಹೋಗಿ ಬರುವೆ ಮಕ್ಕಳೇ..

ರಚನೆ : ರಾಘವೇಂದ್ರ ಪದ್ಮಶಾಲಿ

----------------------------------

ನನ್ನ ಸಮಯವಂತು ಮುಗಿದೇ ಹೋಯ್ತು, ತಡಮಾಡದೇ ನಾ ಹೋಗಿ ಬರುವೆ ಮಕ್ಕಳೇ, ನಿಮ್ಮಿಂದ ಖುಷಿ ಕಂಡ ನಾ ಹೊರಟಿರುವೆ ಒಬ್ಬಳೇ. ಬಾಳ ಪಯಣದಲ್ಲಿ ನೊಂದ ಮನಕೆ, ಬಿಸಿಲ ದಾರಿಯಲ್ಲಿ ಬಲು ದಣಿದ ಜನಕೆ, ನೆರಳಾಗಿರಿ ಮಕ್ಕಳೆ.. ಉಸಿರಾಗಿರಿ ಮಕ್ಕಳೇ.. ನಾನು ಕರಿಮೋಡವಾಗಿ, ಮಳೆ ನೀರ ಹನಿಯಾಗಿ, ಹಾಗೇ ಧರೆಗಿಳಿದು ನಿಮ್ಮನ್ನು ಸೇರುವೆ ಮಕ್ಕಳೇ, ಮತ್ತೆ ನಿಮ್ಮಲ್ಲೇ ಹೊಸ ಚಿಗುರಾಗಿ ನಗುವೆ ಮಕ್ಕಳೇ, ಬಸಿರಲ್ಲಿ ಹುಟ್ಟದಿದ್ದರೂ,ಕೊನೆವರೆಗೂ ಉಸಿರಾದಿರಿ, ಯಾವ ಜನ್ಮದ ಪುಣ್ಯವೋ, ಈ ಪ್ರೀತಿಯಲಿ ಬೆರೆತ ನಾ ಎಂದೆಂದಿಗೂ ನಿಮ್ಮನ್ನು ಬಿಟ್ಟಿರಲಾರೆ ಮಕ್ಕಳೇ.. ಈ ಎಲ್ಲಾ ನೊಂದ ಮನಕೆ, ಈ ಎಲ್ಲಾ ದಣಿದ ಜನಕೆ, ಸದಾ ನೆರಳಾಗಿರಿ ಮಕ್ಕಳೆ.. ಉಸಿರಾಗಿರಿ ಮಕ್ಕಳೇ..

----------------------------------

ನೋಂದಣಿ ಐಡಿ : KPFS2-8706

0
Votes
105
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top