Submission 5228

ಹಾರುತಿಹುದು ಕನ್ನಡ ಬಾವುಟ

ರಚನೆ : ಪಿ.ಜಯರಾಮನ್

----------------------------------

ಹಾರುತಿಹುದು ಹಾರುತಿಹುದು ಹಳದಿ ಕೆಂಪು ಬಾವುಟ ಮುಗಿಲ ಮುಟ್ಟಿ ಹಾರುತಿಹುದು ಕನ್ನಡದ ಬಾವುಟ ಬಿಸಿಲೆ ಇರಲಿ, ಮಳೆಯೆ ಬರಲಿ ಎಂದೆಂದೂ ಹಾರುವುದು ನಮ್ಮ ಈ ಬಾವುಟ. ರಾಮಮೂರ್ತಿ ರಚಿಸಿದ ಧ್ವಜವಿದು ನಾಡೆಲ್ಲ ಕೀರ್ತಿ ಗಳಿಸಿದ ಧ್ವಜವಿದು ಕನ್ನಡಿಗರ ಅಭಿಮಾನದ ಧ್ವಜವಿದು ಕನ್ನಡಿಗರ ಸ್ವಾಭಿಮಾನದ ಧ್ವಜವಿದು. ಹಳದಿ ಬಣ್ಣ ಶಾಂತಿ ಸೌಹಾರ್ದತೆಯ ಸಂಕೇತ ಕೆಂಪು ವರ್ಣ ಕ್ರಾಂತಿ ನಾಂದಿಗೆ ಸಂದೇಶ ಕನ್ನಡ ಬಾವುಟ ಹಾರುವುದೆಲ್ಲೊ ಅದುವೆ ನನ್ನೂರು ಕನ್ನಡ ನುಡಿಯ ನುಡಿಯುವರಾರೊ ಅವರೇ ನನ್ನವರು. ಕೆಣಕ ಬೇಡಿರಿ ಕನ್ನಡಿಗರ ಕೆಣಕ ಬೇಡಿರಿ ಕೂತರೆ ನಾವು ಭುವನೇಶ್ವರಿ ಹಾಗೆ ನಿಂತರೆ ನಾವು ಚಾಮುಂಡಿಯ ಹಾಗೆ.

----------------------------------

ನೋಂದಣಿ ಐಡಿ : KPFS2-8707

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top