Submission 5172

ನಾ `ನಿರುವೆ'

ರಚನೆ : ರಾಜೇಂದ್ರ ನಾಯ್ಕ

----------------------------------

ಕಣ್ಣಿದ್ದವರಿಗೆ ನೀ ಕಾಣುತ್ತಲೇ ಇರುವೆ ಕಂಡಾಗಲೆಲ್ಲಾ ದುಡಿಯುತ್ತಲೇ ಇರುವೆ ಸೂಕ್ಷ್ಮಕಾಯ,ಅತಿಸೂಕ್ಷ್ಮ ಉದರ ಪೊಂದಿರುವೆ ಉದರ ನಿಮಿತ್ತಂ ಬಹುವೇಷ ಇಲ್ಲದಿರುವುದು ನಿನ್ನ ಹಿರಿಮೆ ಸದಾ ಚಟಪಟ ಓಡಾಡುತ್ತಲೇ ಇರುವೆ ಆ ಪುಟ್ಟ ಹೊಟ್ಟೆ ಹೊರೆಯಲು ಬೇಕಾ ನಿಂಗೆ ಈ ಗೊಡವೆ ಶಿಸ್ತಿನಿಂದ ಸಾಲಿನಲಿ ಸೈನಿಕರಂತೆ ಸಾಗುತ್ತಲೇ ಇರುವೆ ಅಡೆತಡೆಗಳು ಬಂದೆರಗಿದರೂ ನೀ ಅಂಜದಿರುವೆ ಗುರಿಯತ್ತ ಚಿತ್ತವಿಟ್ಟು ಸಾಗುವುದ ನಿನ್ನಿಂದಲೆ ಕಲಿಯಲೇ ಅವ್ಯಾಹತ ಹಂತಹಂತವಾದ ಶ್ರಮಗಳ ಫಲಸ್ವರೂಪಿ ನೀನಾಗಿರುವೆ ಶ್ರಮಿಕರಲಿ ನೀನಿರುವೆ ಶ್ರಮವೇ ಸಾಧನೆಯ ಸಾಧನ ಎಂಬರಿಗೆ ಸ್ಪೂರ್ತಿಯಾಗಿರುವೆ ಆಲಸಿಗಳಿಗೆ ನೀ ಸಂದೇಶ ನೀಡುತಿರುವೆ ಶ್ರಮಕ್ಕೆ ಅನ್ವರ್ಥಕ ನಾಮ ನೀನಾಗಿರುವೆ ಶ್ರಮಪಡದಿದ್ದರೆ ಇದ್ದಲ್ಲೇ ಇರುವೆ

----------------------------------

ನೋಂದಣಿ ಐಡಿ : KPFS2-8661

42
Votes
352
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top