Submission 5174

ಅರಿಕೆ

ರಚನೆ : ವೆಂಕಟಲಕ್ಷ್ಮಿ. ಎಸ್. ಬಾಯಿರಿ

----------------------------------

ದುರುಳರಾ ಕೆಡುನುಡಿಯು ನರಳಿಸುತಲಿರೆ ಕೊರಳಸೆರೆಯುಬ್ಬಿ ದುಃಖ ಕಂಬನಿಯಾಗಿಳಿಯುವ ಮುನ್ನ ನಗುವ ಮುಖವಾಡ ಮೊಗದಿ ಧರಿಸಿ ಬಾಳ ಬಂಡಿಯ ಮುನ್ನಡೆಸೆನ್ನ ಮನವೇ ಕೆಸರನಡುವಿನರಳರಳುತಿಹ ಸರಸಿಜದ ಹಸಿರೆಲೆಗಳ ಮೇಲಿರುವ ಜಲಬಿಂದುವಿನಂದದಲಿ ವಸುಧೆಯೊಳು ಬೆಸೆದರೂ ಬೆಸೆಯದಂತಿರುತ ಈ ಭವಾಬ್ಧಿಯೊಳು ಈಜು ಮನವೇ ಕ್ಷಣಿಕವೀ ಬಾಳಿನಲಿ ಸಮಯ ಜಾರುತಲಿಹುದು ಮದ, ಮತ್ಸರ ಮತ್ತೆ ಮೋಹವ ತೊರೆದು, ದೇಹ ನೆಲಕುರುಳುವ ಮುನ್ನ ಜಗಕುಪಕರಿಸುತಲಿ ಸಾರ್ಥಕ್ಯವನು ಪಡೆ ಎನ್ನ ಮನವೇ

----------------------------------

ನೋಂದಣಿ ಐಡಿ : KPFS2-8662

23
Votes
293
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top