ಪಜಿ, ಪಜಿ!! ಅಪ್ಪಾಜಿ!!!
ರಚನೆ : ನಿಹಾರಿಕಾ ಜೈನ್ ಪಿ ಎನ್
----------------------------------
ಮೊದಲ ತೊದಲ ನುಡಿಯಾಗಿ ಕರೆದೆ ಪಜಿ ಪಜಿ! ಬಿಗಿದಪ್ಪಿ ಹೇಳಿದೆ ಅಪ್ಪಾಜಿ!! ಅಂಬೆಗಾಲ ಇಡುತ ನಾ ಬಂದೆ, ಕೈಬೀಸಿ ಅಪ್ಪಿಕೊಂಡು ಮುದ್ದಾಡಿದೆ ಅಳುತ್ತಾ ಹುಡುಕಿ ನಾ ಬಂದೆ , ಚಂದಮಾಮ ಕಥೆ ಹೇಳಿ ಜೋಜೋ ಲಾಲಿ ಹಾಡಿದೆ.. ನೋಡಿದೆ ಇಡೀ ಜಗತ್ತು, ನಿಮ್ಮ ಹೆಗಲ ಏರಿ ಕಲಿತೆ ಜೀವನದ ಪಾಠ ,ನೀವು ನಡೆದ ದಾರಿ ನೋಡಿ ನಿಮ್ಮ ನಗುವಲ್ಲಿ , ನೋಡಿದೆ ನನ್ನ ಗೆಲುವು ನನ್ನ ಗೆಲುವಲ್ಲಿ ನೋಡಿದ್ರಿ ನಿಮ್ಮ ಜೀವನದ ಸಾರ್ಥಕತೆ ನನ್ನ ಖುಷಿ, ನಿಮ್ಮ ಜೀವನದ ಗುರಿಯಾಗಿ.. ನಿಮ್ಮ ಜೀವನವನ್ನೇ ಧಾರೆ ಎರುದ್ರಿ, ನನ್ನ ಜೀವನದ ನಿಲುವಿಗಾಗಿ.. ಭೂಮಿಗೆ ಸ್ಪರ್ಶಿಸಿದ್ದು ಅಮ್ಮ, ನನ್ನ ಮೊದಲ ಅಕ್ಕರೆಯ ಪ್ರೀತಿ ನೀವು ಅಪ್ಪ.. ನಿಮ್ಮ ಕಣ್ಣಲ್ಲಿ ಕಾಣುವ ಖುಷಿಯ ಭಾವವೇ, ಪ್ರತಿದಿನ ನನಗೆ ನೆಮ್ಮದಿಯ ಜೋಜೋ ಲಾಲಿ...
----------------------------------
ನೋಂದಣಿ ಐಡಿ : KPFS2-8659