Submission 5166

ಅವ್ವ

ರಚನೆ : ರವಿ ಎಸ್. ಎನ್

----------------------------------

ಹಡೆವಳು ತಾಯ್ತನದ ಬಸಿರೊಳು ಪೊರೆವಳು ಹಾರೈಕೆಯ ಲಲನೆಯೊಳು ಜೀವವಿಡೀ ತುಡಿವುದು ಹೆಂಗರುಳು ಹಾರೈಸುವಳು ಕೈತುತ್ತೆಂಬ ಅಮೃತದೊಳು ಜೀವವೆಂಬ ಬಿಕ್ಷೆನೀಡಿ ಕಾಯ್ವಳು ನಿರೀಕ್ಷೆಯಿಂದ ತನ್ನ ಸೊಂಟದಿ ಕೂರಿಸಿ ತೋರುವಳು ಜಗವ ಕಿಂಚಿತ್ತೂ ನೋವಾಗದಂತೆ ಕಾಂಬಳು ಮೈದುಂಬಿ ಅಂಬೆಗಾಲಿಡಲು ಬೀಳ್ವಾಗ ಪಿಡಿವಳು ಕೈಯ ದೇಹದಿಂ ಬರುವ ಕೊಳಕ ತೊಳೆದು ಹಚ್ಚುವಳು ಪ್ರೀತಿಯೆಂಬ ಲೇಪನವ ಗೆದ್ದಾಗ ಬೆನ್ನತಟ್ಟಿ ತೋರುವಳು ಸನ್ಮಾರ್ಗವ ಸೋತಾಗ ಹಿತನುಡಿಯುತ ಮುನ್ನಡೆಸುವಳು ಜಗದ ಸುಖವ ಕಾಂಬಳು ಮಗನ ಕಣ್ಣಂಚಲಿ ಕೊನೆಗೆ ಮರೆಯಾಗ್ವಳು ಹಂಬಲದ ಪ್ರೀತಿಯನಿತ್ತು.

----------------------------------

ನೋಂದಣಿ ಐಡಿ : KPFS2-8656

28
Votes
237
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top