ನಮ್ಮ ಕನ್ನಡ ನಾಡು
ರಚನೆ : ಕಮಲಾ ಮಂಜುನಾಥ್
----------------------------------
ಮೆರೆಯಲಿ ಕನ್ನಡ ತಾಯಿಯ ನಾಡು ದೊರೆಯಲಿ ಚಿರಸುಖ ಶಾಂತಿಯ ಬೀಡು// ವೀರೋಧಾತರು ಜನಿಸಿದ ನಾಡು ಧೀರತನದ ಹೊಳೆ ಹರಿಸಿದ ಬೀಡು ಹರಿದಾನಾಡು ಒಂದಾಯಿತು ಗೂಡು ಹಿರಿದಾಗಲಿ ಈ ಕನ್ನಡ ನಾಡು// ಕನ್ನಡ ನಾಡಿನ ನಡೆನುಡಿ ಚೆಂದ ಕನ್ನಡ ವೆಂಬ ಮಾತೇ ಅಂದ ಕನ್ನಡ ಸಾಹಿತ್ಯ ಸಂಗೀತ ಚೆಂದ ಅಂದ ಚೆಂದ ಕನ್ನಡ ಗಂಧ// ಸಂತಸದಲಿ ಹಾರಾಡುತಲಿರಲಿ ಕನ್ನಡ ಮಾತೆಯ ಬಾವುಟವಿಂದು ಕನ್ನಡಿಗರು ಬಾಳಿ ಬೆಳೆಯಲಿ ಕನ್ನಡಾಂಬೆಯ ಪದತಲದಲ್ಲಿ//
----------------------------------
ನೋಂದಣಿ ಐಡಿ : KPFS2-8639