ನನ್ನ ಪ್ರೀತಿಯ ಅಜ್ಜಿ
ರಚನೆ : ಯಶೋದ ಲ ವಡ್ಡರ
----------------------------------
ಅಮ್ಮನಂತೆ ಪ್ರೀತಿ ಕೊಟ್ಟವಳು ಕೈತುತ್ತು ತಿನ್ನಿಸಿ ಬೆಳೆಸಿದವಳು ಒಳ್ಳೆಯ ಸ್ನೇಹಿತೆ ಆಗಿದ್ದವಳು ಹುಸಿನಗೆ ಬೀರಿ ಕಥೆ ಹೇಳಿದವಳು ನಾ ಕಾಡಿಸಿದರು ಗದರದೇ ನಕ್ಕವಳು ದೃಷ್ಟಿ ತೆಗೆದು ಅಪರಂಜಿ ಎನ್ನುತಿದ್ದಲು ಅವಳ ಬಿಗಿದಪ್ಪಿ ಮುತ್ತಿಡುವ ಆಸೆ ಮೂಡಿದೆ ನನ್ನಲ್ಲಿ ಆದರೆ ನೋಡಲು ಸಹ ಅವಳಿಲ್ಲ ಇಲ್ಲಿ ನಕ್ಷತ್ರ ಆಗಿರುವಳು ಆಕಾಶದಲ್ಲಿ ಸಹಸ್ರ ನಕ್ಷತ್ರ ಪುಂಜದಲ್ಲಿ ನನ್ನ ಈ ತಾರೆಯ ಹೇಗೆ ಗುರುತಿಸಲಿ ಅಜ್ಜಿ ಚಿರ ನೆನಪಾಗಿ ನೆಲೆಸಿರುವಳು ನನ್ನ ಬಾಂಧಳದಲ್ಲಿ
----------------------------------
ನೋಂದಣಿ ಐಡಿ : KPFS2-8594