Submission 5088

ಪ್ರೇಮ ಎಂಬ ಹುಚ್ಚು

ರಚನೆ : ಸುಮುಖ ಪಂಡಿತ್

----------------------------------

ಪ್ರೇಮ ಎಂಬುದು ಕೇವಲ ಆಕರ್ಷಣೆಯಲ್ಲ ಪ್ರೀತಿ ಪ್ರೇಮವೇ ಜೀವನದ ಒಳಗಿನ ಮರ್ಮ | ಪ್ರೇಮವೆಂಬ ಎರಡಕ್ಷರ ಬೆಸೆದಿಹುದು ಜೀವಗಳ ಅತಿಯಾದ ಪ್ರೇಮವೇ ಶೋಕಕ್ಕೆ ಕಾರಣ || ತಂದೆ ಮಕ್ಕಳ, ಗಂಡ ಹೆಂಡತಿ ನಡುವಿನ ಸಂಬಂಧ ಗಟ್ಟಿಯಾಗಿ ಬೇರು ಊರಿರುವುದು ಪ್ರೀತಿ ಪ್ರೇಮದಿಂದ | ಇಂದಿನ ಯುವಕರು ಪ್ರೀತಿ ಎಂಬ ಮೋಸದ ಜಾಲಕ್ಕೆ ಬಿದ್ದು ಮಾಡುತಿಹರು ಸಾವು ಎಂಬ ನಿರ್ಧಾರ || ಪ್ರಸನ್ನತೆಯಿಂದ ಸಾವಧಾನದಳೊಮ್ಮೆ ಜಾಗರೂಕರಾಗಿ ದರ್ಪಣವ ನೋಡಿ ನಸು ನಕ್ಕು ಯೋಚಿಸಿ | ಇಂದೇ ಎಲ್ಲರೂ ನಿರ್ಧಾರ ಮಾಡೋಣ ಪ್ರೀತಿ ಪ್ರೇಮಗಳ ಮಧ್ಯೆ ಮಾನವೀಯತೆಯನ್ನು ಬೆಳೆಸೋಣ || ಸರ್ವೇ ಜನಾ ಸುಖಿನೋ ಭವಂತು || ಲೋಕಾ ಸಮಸ್ತ ಸುಖಿನೋ ಭವಂತು ||

----------------------------------

ನೋಂದಣಿ ಐಡಿ : KPFS2-8597

7
Votes
119
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top