Submission 5084

ಕನ್ನಡಾಂಬೆಗೆ ನಮನ

ರಚನೆ : ಭಾರತಿ ಆರ್ ಭಟ್

----------------------------------

ಮಾತೆ ನಿನಗೆ ಅರ್ಚಿಸುವೆ ನಾ ಮಾತೃ ಭಾಷೆಯ ನುಡಿಯಲಿ. ಹರಸು ನಮ್ಮನು ಕನ್ನಡಾಂಬೆಯೆ ಶಿರವನಿಡುವೆನು ನಿನ್ನ ಪದದಲಿ. ಕನ್ನಡವ ತೊದಲುವೆನು ನಾನು ಮನ್ನಿಸೆನ್ನೆಯ ನುಡಿಯನು. ಗರ್ವದಲಿ ಪೇಳುವೆನು ಕನ್ನಡ ನನ್ನ ಉಸಿರಿನ ಕನ್ನಡಿ. ಬೀಸೊ ಗಾಳಿಯ ಗಾಯನವು ಗೊಣಗುತಿದೆ ಕನ್ನಡವನು ಹರಿವ ನದಿಗಳು ನುಡಿಸುತಿವೆ ಕನ್ನಡದ ವೀಣೆಯ ಇಂಪನೆ. ಭಾನು ಬೆಳಗುವ ಸಾಲು ಹಣತೆಯು ಸಾರಿ ಹೇಳಿವೆ ಕನ್ನಡಾಂಬೆಯು ಮಾತೆ ಕನ್ನಡಿಗರಿಗೆ ಮಾತೃ ಭಾಷೆಯು.

----------------------------------

ನೋಂದಣಿ ಐಡಿ : KPFS2-8590

77
Votes
601
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top