ನನ್ನವಳಿವಳು
ರಚನೆ : ಸಿದ್ಧಾರ್ಥ್
----------------------------------
ನಾನು ಕಟ್ಟಿದ ತಾಳಿಗೆ ಒಪ್ಪಿಗೆ ಕೊಟ್ಟವಳು ನನ್ನೊಡನೆ ಏಳು ಹೆಜ್ಜೆಯ ಹಾದಿ ತುಳಿದವಳು ನನ್ನ ಮನದ ನೋವಿಗೆ ಮುಲಾಮು ಹಚ್ಚಿದವಳು ನನ್ನ ಹೃದಯದ ಭಾವನೆಗೆ ತಕ್ಷಣ ಸ್ಪಂದಿಸಿದವಳು ನಷ್ಟದಲ್ಲಿ ಭಾಗಿಯಾದವಳು ಮಮತೆಯ ಮೂರ್ತಿಯಿವಳು ಸಹನೆಗೆ ಸ್ಪೂರ್ತಿಯಿವಳು ನನ್ನ ಬದುಕಿಗೆ ಆಸರೆಯಾದವಳು ನನಗೆ ಮಡದಿಯ ರೂಪದಿ ತಾಯಿಯಾದವಳು...ನನ್ನವಳಿವಳು
----------------------------------
ನೋಂದಣಿ ಐಡಿ : KPFS2-8464