Submission 4920

ಹೆಣ್ಣು

ರಚನೆ : ರೇಣುಕಾ ಶಂಕರ ರಾವ್

----------------------------------

ಹಕ್ಕಿಯಂತೆ ಹಾರುವ ಆಸೆ, ಆದರೆ ಬಿಸಿಲು-ಗಾಳಿಗೆ ಅಂಜಿ ಕೂತಿರುವೆ. ನಕ್ಷತ್ರದಂತೆ ಮಿನುಗುವಾಸೆ, ಆದರೆ ಕತ್ತಲಿಗೆ ಹೆದರಿ ಕೂತಿರುವೆ. ಮೀನಿನಂತೆ ಈಜುವ ಆಸೆ, ಆದರೆ ನೀರಿನ ಒತ್ತಡ ಮತ್ತು ಅಲೆಗಳಿಗೆ ಹೆದರಿ ಕೂತಿರುವೆ. ಹೂವಿನ ಹಾಗೆ ಅರಳುವಾಸೆ, ಆದರೆ ಮುಳ್ಳುಗಳಿಗೆ ಹೆದರಿ ಕೂತಿರುವೆ. ಕೊಡೆ ಹಾಗೆ ಸಹಾಯ ಮಾಡುವ ಆಸೆ, ಆದರೆ ಮಳೆ-ಗಾಳಿಗೆ ಹೆದರಿ ಕೂತಿರುವೆ. ಸೂರ್ಯನ ಹಾಗೆ ಬೆಳಕು ನೀಡುವ ಆಸೆ, ಆದರೆ ಕನಸುಗಳಿಗೆ ಬೇಲಿ ಹಾಕಿ ಕೂತಿರುವೆ. ಹೆಣ್ಣೆಂದರೆ ಜಗದ ಕಣ್ಣು ಅವಳಿಗೆ ಕೊಡಿ, ಮನೆಯ ಮನ ಬೆಳಗುವ ಧೈರ್ಯ, ವಾತ್ಸಲ್ಯ ಭರವಸೆ ಮತ್ತು ಅವಕಾಶ , ಗೌರವದ ಹಣತೆ.

----------------------------------

ನೋಂದಣಿ ಐಡಿ : KPFS2-8466

1
Votes
124
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top