ನಾಟ್ಯ ಗದ್ಯದ ಪದ್ಯ
ರಚನೆ : ದೀಪಾ ಬಿ. ಕೆ
----------------------------------
ಅಬ್ಬಾ.! ನೋಡಲು ಎಂತಹ ಅದ್ಭುತ., ತಪಸ್ಸಿರಬೇಕು ಮಾಡಿಕೊಳ್ಳಲು ಅದ ಕರಗತ. ಇವೆಲ್ಲಾ ನಾದ-ನಿನಾದಗಳ ಪಾರಮ್ಯತೆ, ಮುಖ-ಮುದ್ರೆಗಳ ಮಹೋತ್ಸವ., ಅವೆಲ್ಲಾ ಶೃತಿ-ಲಯಗಳ ಲಾಲಿತ್ಯದ ಗಮ್ಯತೆ ; ಹಾವ-ಭಾವಗಳ ರಾಗೋತ್ಸವ. ಏಕಾಗ್ರತೆಯ ಆವರಣದಿ ಮೂಡಿದೆ, ಗೆಜ್ಜೆಗಳ ಸದ್ದಿಗೆ., ತಾಳ-ಮೇಳಗಳ ಪೂರಣದಿ ಮೆರೆದಿದೆ,, ಹೆಜ್ಜೆಗಳ ಗದ್ದುಗೆ. ಭಾಷೆ-ಸಂಸ್ಕೃತಿಯ ಒಡಲು., ನಮ್ಮಯ ಕಲೆಗಳ ಪ್ರತೀಕ.! ಕಲಿತಷ್ಟು ಮುಗಿಯದ ಕಡಲು ; ಹೆಮ್ಮೆಯ ನೆಲೆಗಳ ಪ್ರದೀಪಕ.!!
----------------------------------
ನೋಂದಣಿ ಐಡಿ : KPFS2-8459