Submission 4914

ಹೊಸ ವರುಷ

ರಚನೆ : ಮಧು ಕೆ ದೇವರಾಜ್

----------------------------------

ಕಂಡದ್ದು ನನಸಾಗಿ ಇರಲಿ ಕಾಣದ್ದು ಕನಸಾಗಿ ಬರಲಿ ಬರುವ ದಿನಗಳು ಒಳ್ಳೆಯದನ್ನೇ ತರಲಿ ಮುಂದೆ ಕೆಡುಕಾಗದಂತೆ ಇರಲಿ ಸುಖ- ದುಃಖದ ನಡುವೆ ಬದುಕು ಸಾಗಲಿ ನಕ್ಕರೆ ಮನದ ದುಃಖ ಮರೆಯಾಗುವಂತಿರಲಿ ಅತ್ತರೆ ಕಣ್ಣೀರು ಯಾರಿಗೂ ಕಾಣದಂತಿರಲಿ ಬದುಕಿದರೆ ಯಾರ ಕಣ್ಣಿಗೂ ಬೀಳದಂತಿರಲಿ ಹೊಸದು ಬಂದು ಹಳತನ್ನು ಮರೆಸದಿರಲಿ ಬೆಸೆದ ಸಂಬಂಧಗಳು ಹೊಳಪನ್ನು ತರಲಿ ಬರುವ ದಿನಗಳು ಭರವಸೆಯ ಬೆಳಕಾಗಲಿ ಇಂದು ನಾಳೆಗಳ ನಡುವೆ ಬದುಕು ಸಾಗುತಲಿರಲಿ

----------------------------------

ನೋಂದಣಿ ಐಡಿ : KPFS2-8458

0
Votes
116
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top