ಸುನೀತ ನೀ ಪುನೀತ
ರಚನೆ : ಮಂಜುಳಾ ಬಿ ಹರವೆ
----------------------------------
ಕಳೆದುರುಳಿದವು ದಿನಗಳು ಕ್ಷಣಗಳಂತೆ ವರುಷಗಳುರುಳಿದ್ದು ಬಾರಲೇ ಇಲ್ಲ ಅರಿವಿಗೆ ಮನವಿಲ್ಲ, ನೋವಿಹುದು ನೀ ಗೈರು ಎನ್ನಲಿಕ್ಕೆ ನೀ ನಡೆದ ನಡಿಗೆಯೇ ಸ್ಪೂರ್ತಿ ಮನುಕುಲಕ್ಕೆ, ಪ್ರೀತಿಯ ಪೊರೆಯುಕ್ತಿ- ನಮ್ಮಲ್ಲೇ ನೀನಿರುವೆಯೆಂದೂ. ಶೋಭೆಯೇ ನಿನಗೆ ನಿರಂತರ ಶೋಕಧಾರೆಗೆ ದೂಡಿ ಸತಿ ಸುತೆಯರನ್ನ ಮರೆತು ಸಿದ್ಧಾರ್ಥನಂತೆ ನಡೆದಿದ್ದು! ಬರುವೆಯೇನೋ ನೀ ಬಾ ಎಂದು ಅಂಗಲಾಚಿದರೆ ಓ! ಬಿಡಲೊಪ್ಪ ಭಗವಂತ ಅಭಿಮಾನಿದಿಂದ ಅಪ್ಪಿದ ನಿನ್ನ ಮೂಕನವನು ನಿನ್ನ ಸುಗುಣ ಸಂಪನ್ನತೆಗೆ. ನೆನೆದರೆ ಕಣ್ಣೀರ ಕೋಡಿ ನಮಗಿನ್ನೂ! ಮಾಯಾವೀ ನೀ! ನೀ ಮಾತ್ರ ನಾಕದಲ್ಲೂ ನಗುಮುಖದ ನಟರಾಜ, ಚಂದನವನದ ಚಂದದ ಚಕ್ರವರ್ತಿನೀ ಅಜರಾಮರ. ನಿನಗಿಲ್ಲಿ ಯಾರಿಲ್ಲ ಸಾಟಿ ನೀನೊಂದು ಸುಂದರ ಸುನೀತ.
----------------------------------
ನೋಂದಣಿ ಐಡಿ : KPFS2-8456