Submission 4902

ಹೆಣ್ಣು ಎಂದರೆ ಹೇಗಿರಬೇಕು

ರಚನೆ : ಪದ್ಮಾವತಿ ಯರಮಸಾಳ

----------------------------------

ಹೆಣ್ಣು ಎಂದರೆ ಹೇಗಿರಬೇಕು ಈ ಕಲಿಯುಗದಲ್ಲಿ ಸಿಡಿಗುಂಡಿನ ಹಾಗೇ ಸಿಡಿಯುವ ವೀರವನಿತೆಯಂತಿರಬೇಕು! ಹೆಣ್ಣು ಎಂದರೆ ಹೇಗಿರಬೇಕು? ಹಿಂದೂ ಧರ್ಮದ ಸಂಕೇತವಾಗಿ ಧರ್ಮವನ್ನು ಕಾಪಾಡುವಂತಹ ಸೀತಾಮಾತೆಯಂತಿರಬೇಕು! ಹೆಣ್ಣು ಎಂದರೆ ಹೇಗಿರಬೇಕು? ಕಡುಕತ್ತಲೆ ಕಡುಕಷ್ಟವೇ ಎದುರಾದರೂ ಎದೆಗುಂದದೇ ಮುನ್ನಡೆಯಬೇಕು ಒಬ್ಬಂಟಿಯ ಜೀವನಕ್ಕೆ ನಾಂದಿಯಾಗಬೇಕು! ಹೆಣ್ಣು ಎಂದರೆ ಹೇಗಿರಬೇಕು ಜೀವನದ ಹೋರಾಟದಲ್ಲಿ ಸ್ವತಂತ್ರವಾದ ಹಕ್ಕಿಯಂತೆ ಹಾರಾಡಬೇಕು!

----------------------------------

ನೋಂದಣಿ ಐಡಿ : KPFS2-8448

42
Votes
276
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top