Submission 4904

ಮಾರ್ಮಿಕಯುಗ

ರಚನೆ : ಪ್ರವೀಣ್ ಕುಮಾರ್

----------------------------------

ಪಟ್ಟಣದಲ್ಲೀಗ ಕೂಗದು ಮುಂಜಾವ ಕೋಳಿ ಘಂಟಾನಾದದಿ ಎಬ್ಬಿಸುವುದು ಅಲಾರಾಂ ಎದ್ದೇಳಿ ಆಗಿತ್ತು ಎದ್ದೊಡನೆ ಕರದರ್ಶನ ಈಗ ಶವಾಸನದಲೇ ಜಂಗಮವಾಣಿಯ ದರ್ಶನ ಮಾಯವಾಗಿದೆ ಹೊರ ಜಗದ ಮೌನ ಹಗಲಿರುಳುನ್ನೇದೆ ಓಡುತ್ತಿರುವ ವಾಹನ ಇಂಗಾಲ ಮಿಶ್ರಿತ ಗಾಳಿ ಇಟ್ಟಿದೆ ದಾಂಗುಡಿ ಬೀದಿಯಲೇ ತೆರೆಯಲಿವೆ ಆಮ್ಲಜನಕದ ಅಂಗಡಿ ಧೈತ್ಯಬಾಹುವಿನ ಕೈಯಲ್ಲಿ ಉರುಳಿಹ ಮರಗಳು ಸೀಳಿದಂತಾಗಿದೆ ಪ್ರಕೃತಿಯ ಕೊರಳು ಏರುತಲಿದೇ ಈ ಭೂ ತಾಪಮಾನ ಮಾನವ ಎಂದಿಗೂ ಬಿಡನು ತನ್ನ ಜಾಯಮಾನ ಕಲಿಯುಗವಾಗಿದಲಿ ಹೆಚ್ಚಿದೆ ತಾಂತ್ರಿಕತೆ ಮರೆಯಾಗಿದೆ ಜನರಲಿ ಮಾನವೀಯತೆ

----------------------------------

ನೋಂದಣಿ ಐಡಿ : KPFS2-8450

0
Votes
80
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top